ಪತ್ರಿಕಾ ಪ್ರಕಟಣೆ July 2026

ಇಳಕಲ್ಲನ ಎಸ್‌ವಿಎಂವಿವಿ ಸಂಘದ ಎಸ್‌ಜೆಜಿಎಂ ಐಟಿಐ ಕಾಲೇಜಿನಲ್ಲಿ ಟೊಯೋಟಾ ಮತ್ತು ಹೊಂಡಾ ಕಂಪನಿಗಳಿಂದ ಯಶಸ್ವಿ ಕ್ಯಾಂಪಸ್ ಸಂದರ್ಶನ

ಇಳಕಲ್: ಸ್ಥಳೀಯ ಗ್ರಾಮೀಣ ಭಾಗದ ತಾಂತ್ರಿಕ ವಿದ್ಯಾರ್ಥಿಗಳ ಉದ್ಯೋಗಾವಕಾಶಕ್ಕೆ ಭಾರಿ ಉತ್ತೇಜನ ನೀಡುವ ನಿಟ್ಟಿನಲ್ಲಿ, ಇಲ್ಲಿನ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ (ಎಸ್‌ವಿಎಂವಿವಿ ಸಂಘ) ಶ್ರೀ ಜಗದ್ಗುರು ಗಂಗಾಧರ ಮೂರುಸಾವಿರಮಠ ಕೈಗಾರಿಕಾ ತರಬೇತಿ ಸಂಸ್ಥೆಯು (ಐಟಿಐ) ತನ್ನ ಆವರಣದಲ್ಲಿ ಜಗತ್ತಿನ ಪ್ರಮುಖ ಆಟೋಮೊಬೈಲ್ ಸಂಸ್ಥೆಗಳಾದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ಮತ್ತು ಹೊಂಡಾ ಮೋಟಾರಸೈಕಲ್ ಆಂಡ್ ಸ್ಕೂಟರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಗಳ ಸಹಯೋಗದೊಂದಿಗೆ ಬೃಹತ್ ಕ್ಯಾಂಪಸ್ ಡ್ರೈವ್‌ಗಳನ್ನು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದೆ.